ಬುಧವಾರ, ಏಪ್ರಿಲ್ 29, 2009

ಸರಸ್ವತಿಗೆ ನಮನ

ನಮ್ಮ ಮಕ್ಕಳಿಗೆ ನಾವು ಕಲಿಸಲೇ ಬೇಕಾದ್ದು ವಿದ್ಯಾಧಿದೇವತೆ ಸರಸ್ವತೀ ದೇವಿಗೆ ಭಕ್ತಿ ಪೂರ್ವಕ ನಮನ ಸಲ್ಲಿಸುವ ಈ ಪುಟ್ಟ ಶ್ಲೋಕ ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣಿ , ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ .

(ಅರ್ಥ : ವಿದ್ಯಾದಿ ದೇವತೆಯಾದ ಸರಸ್ವತೀ ಮಾತೆಯೇ ನಿನಗಿದೋ ನನ್ನ ಸಾಷ್ಟಾಂಗ ನಮಸ್ಕಾರ . ನೀನು ಇಷ್ಟಾರ್ಥವನ್ನೆಲ್ಲಾ ಕರುಣಿಸುವ ಮಹಾತಾಯಿ ,ನಾನೀಗ ವಿದ್ಯಾರ್ಜನೆಯನ್ನು ಆರಂಬಿಸುತ್ತಿದ್ದೇನೆ . ಆದ್ದರಿಂದ ನನಗಿನ್ನು ಸದಾಕಾಲ ನಿನ್ನ ಅರ್ಶಿರ್ವಾದ ಕರುಣಿಸು , ನನಗೆ ವಿದ್ಯಾಬ್ಯಾಸ ಸಂಪೂರ್ಣ ಸಿದ್ದಿಸುವಂತಹ ವರವನ್ನು ನೀಡು, ವಿದ್ಯೆ ಮತ್ತು ಬುದ್ದಿಯನ್ನು ದಯಾಪಾಲಿಸು .)


ತಾತ್ಪರ್ಯ : ನಮ್ಮ ಮಕ್ಕಳು ಪ್ರತಿ ದಿನವೂ ಬೆಳಗಿನ ಜಾವವೇ ಹಾಸಿಗೆ ಬಿಟ್ಟೆದ್ದು , ಶೌಚ ವಿಧಿ ಮುಗಿಸಿ,ಹಲ್ಲುಜ್ಜಿ, ಮುಖತೊಳೆದು, ಸರಸ್ವತಿಗೆ, ತಾಯಿ-ತಂದೆಗೆ ನಮಸ್ಕರಿಸಿ ವಿದ್ಯಾಬ್ಯಾಸಕ್ಕೆ ಕುಲಿತುಕೂಳ್ಳಬೇಕು. ಹೀಗೆ ಅದ್ಯಯನ ಆರಂಭಿಸುವ ಮೊದಲು, ಮೇಲೆ ತಿಳಿಸಲಾದ ಪುಟ್ಟ ಶ್ಲೋಕವನ್ನು ಭಕ್ತಿಯಿಂದ ಎರಡೂ ಕೈಮುಗಿದು ಹೇಳಿಕೊಂಡರೆ ಓದಿದ್ದೆಲ್ಲ ಮನಸ್ಸಿಗೆ ನಾಟುತ್ತದೆ ಎಂಬ ಪ್ರತೀತಿ. ನಿಜ ಇದು ನಮ್ಮ ಸಂಸೃತಿ. ಪುಟ್ಟ ಶ್ಲೋಕ ಹೇಳುವುದಕ್ಕೆ ಹೆಚ್ಚು ಸಮಯವೇನೂ ಬೇಡ, ಒಂದೇ ನಿಮಿಷ ಸಾಕು . ಆದರೆ ಈ ಶ್ಲೋಕವನ್ನು ಕಲಿಯುವುದರಿಂದ ಭಾಷೆ ಶುದ್ದವಾಗುತ್ತದೆ , ಮನಸ್ಸು ಖಂಡಿತವಾಗಿಯೂ ಪ್ರಫುಲ್ಲಿತವಾಗುತ್ತದೆ.

ಗುರುವಾರ, ಏಪ್ರಿಲ್ 2, 2009

ಎದೆ ತುಂಬಿ ಹಾಡಿದೆನು

Wikisource ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಎದೆ ತುಂಬಿ ಹಾಡಿದೆನು ಅಂದು ನಾನು |
ಮನವಿಟ್ಟು ಕೇಳಿದಿರಿ ಅಲ್ಲಿ ನೀವು ||


ಇಂದು ನಾ ಹಾಡಿದರೂ, ಅಂದಿನಂತೆಯೆ ಕುಳಿತು |
ಕೇಳುವಿರಿ ಸಾಕೆನಗೆ ಅದುವೆ ಬಹುಮಾನ |
ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ? ||

ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ |
ಹಾಡುವುದು ಅನಿವಾರ್ಯ ಕರ್ಮ ನನಗೆ |
ಕೇಳುವವರಿಹರೆಂದು ನಾ ಬಲ್ಲೆ ಅದರಿಂದ |
ಹಾಡುವೆನು ಮೈದುಂಬಿ ಎಂದಿನಂತೆ |
ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ ||


ರಚನೆ : ಜಿ.ಎಸ್.ಶಿವರುದ್ರಪ್ಪ
ಸಂಗೀತ : ಮೈಸೂರು ಅನಂತಸ್ವಾಮಿ

ಗಾಯನ : ಮೈಸೂರು ಅನಂತಸ್ವಾಮಿ
ಆಲ್ಬಂ : ಭಾವ ಸಂಗಮ

ಗಾಯನ : ರತ್ನಮಾಲ ಪ್ರಕಾಶ್
ಆಲ್ಬಂ : MSIL ಗೀತೆಗೆಳು ಭಾಗ 3 - ಎದೆ ತುಂಬಿ ಹಾಡಿದೆನು


ಈ ಬಾನು ಈ ಹಕ್ಕಿ

Wikisource ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಈ ಬಾನು ಈ ಚುಕ್ಕಿ
ಈ ಹೂವು ಈ ಹಕ್ಕಿ

ತೇಲಿ ಸಾಗುವ ಮುಗಿಲು ಹರುಷವುಕ್ಕಿ
ಯಾರು ಇಟ್ಟರು ಇವನು ಹೀಗೆ ಇಲ್ಲಿ
ತುದಿ ಮೊದಲು ತಿಳಿಯದೀ ನೀಲಿಯಲಿ

ಒಂದೊಂದು ಹೂವಿಗು ಒಂದೊಂದು ಬಣ್ಣ
ಒಂದೊಂದು ಜೀವಕು ಒಂದೊಂದು ಕಣ್ಣ
ಯಾವುದೊ ಬಗೆಯಲ್ಲಿ ಎಲ್ಲರಿಗು ಅನ್ನ
ಕೊಟ್ಟ ಕರುಣೆಯ ಮೂಲ ಮರೆತಿಹುದು ತನ್ನ
ಮರೆತಿಹುದು ತನ್ನ

ನೂರಾರು ನದಿ ಕುಡಿದು
ಮೀರದ ಕಡಲು
ಬೋರೆಂದು ಸುರಿಸುರಿದು
ಆರದ ಮುಗಿಲು

ಸೇರಿಯು ಕೋಟಿ ತಾರೆ
ತುಂಬದ ಬಯಲು
ಯಾರದೀ ಮಾಯೆ
ಯಾವ ಬಿಂಬದ ನೆರಳು
ಬಿಂಬದ ನೆರಳು

ಹೊರಗಿರುವ ಪರಿಯೆಲ್ಲ ಅಡಗಿಹುದೇ ಒಳಗೆ
ಹುಡುಕಿದರೆ ಕೀಲಿ ಕೈ ಸಿಗದೆ ಎದೆ ಯೊಳಗೆ
ತಿಳಿಯದ್ದೆಲ್ಲದರಲ್ಲಿ ಕುಳಿತಿರುವೆ ನೀನೆ
ಎನ್ನುವರು ನನಗೀಗ
ಸೋಜಿಗವು ನಾನೆ
ಸೋಜಿಗವು ನಾನೆ